ಕೊಡಗು :ದುಬಾರೆ ಶಿಬಿರದಲ್ಲಿ ಆನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಬಲಿ

A herd of African elephants roaming the lush greenery of Kenya's national park.

ಕೊಡಗು: ಪ್ರವಾಸಿಗರ ನೆಚ್ಚಿನ ತಾಣವಾದ ಕೊಡಗುಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಿನ್ನೆ ಸಂಜೆ ಭೀಕರ ದುರಂತ ಸಂಭವಿಸಿದೆ.

ಆನೆಗಳ ಸ್ನಾನದ ವೇಳೆ ನಡೆದ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬರು ಆನೆಯ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದು ಮೃತ ಮಹಿಳೆಯನ್ನು ತಮಿಳುನಾಡಿನ ಚೆನ್ನೈ ಮೂಲದ ಜ್ಯುನೇಶ್ (33) ಎಂದು ಗುರುತಿಸಲಾಗಿದೆ.

ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಕೊಡಗಿಗೆ ಪ್ರವಾಸ ಬಂದಿದ್ದ ಇವರು, ಇಂದು ದುಬಾರೆ ಆನೆ ಶಿಬಿರಕ್ಕೆ ಭೇಟಿ ನೀಡಿದ್ದರು.ದುಬಾರೆಯ ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ ನಡೆಯುತ್ತಿತ್ತು ಈ ಸಂದರ್ಭದಲ್ಲಿ ‘ಕಂಜನ್’ ಎಂಬ ಆನೆಯು ಮತ್ತೊಂದು ಆನೆಯಾದ ‘ಮಾರ್ತಾಂಡ’ನಿಗೆ ಜೋರಾಗಿ ತಿವಿದಿದೆ. ಆನೆಗಳ ನಡುವೆ ಇದ್ದಕ್ಕಿದ್ದಂತೆ ಕಾದಾಟ ಶುರುವಾದ ಕಾರಣ ಸುತ್ತಮುತ್ತಲಿದ್ದವರು ಆತಂಕಗೊಂಡಿದ್ದಾರೆ. ಈ ಕಾದಾಟದ ವೇಳೆ ಆನೆಯೊಂದು ಹತೋಟಿ ತಪ್ಪಿ ಪ್ರವಾಸಿ ಮಹಿಳೆ ಜ್ಯುನೇಶ್‌ ಅವರ ಮೇಲೆ ಬಿದ್ದಿದೆ. ಬೃಹತ್ ಗಾತ್ರದ ಆನೆಯ ಭಾರಕ್ಕೆ ಸಿಲುಕಿದ ಮಹಿಳೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Leave a Reply

Your email address will not be published. Required fields are marked *

Join WhatsApp