ಬೆಂಗಳೂರು : ಜಾಲಹಳ್ಳಿ ಕ್ರಾಸ್‌ ಫ್ಲೈಓವರ್ ಪಿಲ್ಲರ್ ಒಳಗೆ ವ್ಯಕ್ತಿಯ ವಾಸ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಕ್ಕೊಂದು ವಿಚಿತ್ರ ಘಟನೆ ಬೆಳಕಿಗೆ ಬರುತ್ತಲೇ ಇರುತ್ತದೆ. ಆದರೆ ಜಾಲಹಳ್ಳಿ ಕ್ರಾಸ್‌ನಲ್ಲಿ ನಡೆದಿರುವ ಈ ಘಟನೆ ಮಾತ್ರ ಸಾರ್ವಜನಿಕರನ್ನು ಅಚ್ಚರಿಗೊಳಿಸಿದೆ. ಜನಸಂದಣಿ, ಮೆಟ್ರೋ ಸಂಚಾರ ಮತ್ತು ಸಾವಿರಾರು ವಾಹನಗಳ ಓಡಾಟದ ನಡುವೆ ಇರುವ ಫ್ಲೈಓವರ್ ಪಿಲ್ಲರ್‌ನೊಳಗೆ ವ್ಯಕ್ತಿಯೊಬ್ಬ ವಾಸಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

ಫ್ಲೈಓವರ್ ಪಿಲ್ಲರ್‌ನ ಕಾಂಕ್ರೀಟ್ ಒಳಭಾಗದಲ್ಲಿರುವ ಕಿರಿದಾದ ಜಾಗದಲ್ಲಿ ವ್ಯಕ್ತಿಯೊಬ್ಬ ಮಲಗಿರುವುದು ಪತ್ತೆಯಾಗುತ್ತಿದ್ದಂತೆ ಸ್ಥಳೀಯರು, ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಆಶ್ಚರ್ಯಚಕಿತರಾದರು. ಈ ದೃಶ್ಯವನ್ನು ನೋಡಲು ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದರುಈ ವ್ಯಕ್ತಿಯ ಹೆಸರು ರಂಗನಾಥ್(38)ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರ ನಿವಾಸಿ.ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಹಮಾಲಿ ಕಾರ್ಮಿಕ. ಶಾಶ್ವತ ವಾಸಸ್ಥಳವಿಲ್ಲದೆ ಅಲೆದಾಡುತ್ತಿದ್ದ ವ್ಯಕ್ತಿ.ಪಿಲ್ಲರ್ ಒಳಗೆ ಹೋಗುತ್ತಿದ್ದದ್ದು ಹೇಗೆ?ಅತ್ಯಂತ ಕಿರಿದಾದ ಮತ್ತು ಎತ್ತರದ ಈ ಜಾಗಕ್ಕೆ ಯಾವುದೇ ಏಣಿ ಅಥವಾ ಅಧಿಕೃತ ಪ್ರವೇಶ ಮಾರ್ಗ ಇರಲಿಲ್ಲ. ಆದರೂ ರಂಗನಾಥ್ ಹತ್ತಿರದ ಪೈಪ್‌ಗಳು ಹಾಗೂ ಕಾಂಕ್ರೀಟ್‌ನ ಸಣ್ಣ ಆಸರೆಗಳನ್ನು ಬಳಸಿಕೊಂಡು ಮೇಲಕ್ಕೆ ಹತ್ತಿ ಪಿಲ್ಲರ್ ಒಳಗೆ ಪ್ರವೇಶಿಸುತ್ತಿದ್ದ ಎನ್ನಲಾಗಿದೆ.

ಹಗಲು ವೇಳೆ ಕೂಲಿ ಕೆಲಸ ಮಾಡುತ್ತಿದ್ದ ಆತ, ಮುಂಜಾನೆ ಯಾರ ಗಮನಕ್ಕೂ ಬಾರದಂತೆ ಪಿಲ್ಲರ್ ಒಳಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದ. ಸಂಜೆ ವೇಳೆಗೆ ಮತ್ತೆ ಕೆಳಗೆ ಇಳಿದು ಬರುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ.ಆಕಸ್ಮಿಕವಾಗಿ ಬೆಳಕಿಗೆ ಬಂದ ಸಂಗತಿಸ್ಥಳೀಯರ ಮಾಹಿತಿ ಪ್ರಕಾರ, ರಂಗನಾಥ್ ಹಲವು ದಿನಗಳಿಂದ ಫ್ಲೈಓವರ್‌ನ ‘ಎಕ್ಸ್‌ಪಾನ್ಷನ್ ಗ್ಯಾಪ್’ ಎಂದು ಕರೆಯಲಾಗುವ ಕಿರಿದಾದ ಜಾಗದಲ್ಲೇ ತಂಗಿದ್ದ.ಕಳೆದ ವಾರ ಮಧ್ಯಾಹ್ನ ಸಾರ್ವಜನಿಕರೊಬ್ಬರು ಆಕಸ್ಮಿಕವಾಗಿ ಮೇಲಕ್ಕೆ ನೋಡಿದಾಗ, ಪಿಲ್ಲರ್ ಒಳಗಿನಿಂದ ವ್ಯಕ್ತಿಯ ಕಾಲುಗಳು ಕಾಣಿಸಿಕೊಂಡಿವೆ.

ಅನುಮಾನಗೊಂಡು ಪರಿಶೀಲಿಸಿದಾಗ ಅಲ್ಲಿ ವ್ಯಕ್ತಿಯೊಬ್ಬ ನಿರಾಳವಾಗಿ ಮಲಗಿರುವುದು ಗೊತ್ತಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಕೆಳಗೆ ಜನರು ಗುಂಪುಗೂಡಿ ವಿಡಿಯೋ ಮಾಡುತ್ತಿದ್ದರೂ ಆತ ಗಾಢ ನಿದ್ರೆಯಲ್ಲಿದ್ದ.ಸಾವಿರಾರು ಜನ ಸಂಚರಿಸುವ ಜಾಲಹಳ್ಳಿ ಕ್ರಾಸ್‌ನಂತಹ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ನಿಯಮಿತ ಪರಿಶೀಲನೆ ಹಾಗೂ ನಿರ್ವಹಣೆಯಲ್ಲಿ ಲೋಪವಿದೆಯೇ ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.ಅಂತಿಮವಾಗಿ…ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಂಗನಾಥ್ ಅವರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿ ಅಗತ್ಯ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.ಇದಾದ ನಂತರ ಬಿಬಿಎಂಪಿ ಅಧಿಕಾರಿಗಳು ಪಿಲ್ಲರ್‌ನಲ್ಲಿದ್ದ ಖಾಲಿ ಜಾಗಕ್ಕೆ ಕಬ್ಬಿಣದ ಜಾಲರಿ ಅಳವಡಿಸಿ ಮುಚ್ಚುವ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp