ಎರಡನೇ ಬಾರಿಗೆ ಟ್ರೋಫಿ ಗೆದ್ದ ಆರ್ ಸಿ ಬಿ

ಆರ್​ಸಿಬಿ (RCB).. ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ (IPL) ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ತಂಡ. ಈ ತಂಡದ ಪರವಾಗಿ ಹಲವು ದಿಗ್ಗಜ ಕ್ರಿಕೆಟಿಗರು ಸಾಕಷ್ಟು ವರ್ಷ ಕ್ರಿಕೆಟ್ ಆಡಿದ್ದಾರೆ. ಆದರೆ ಅಂತಹವರ ಉಪಸ್ಥಿತಿಯ ಹೊರತಾಗಿಯೂ ಸತತ 17 ವರ್ಷಗಳವರೆಗೆ ಆರ್​ಸಿಬಿಗೆ ಒಮ್ಮೆಯೂ ಚಾಂಪಿಯನ್‌ ಪಟ್ಟಕ್ಕೇರಲು ಸಾಧ್ಯವಾಗಲಿಲ್ಲ. ಆದರೆ ಕಳೆದ ಆವೃತ್ತಿಯಲ್ಲಿ ಆ ಟ್ರೋಫಿ ಬರವನ್ನು ನೀಗಿಸಿಕೊಂಡು ತನ್ನ ಅಭಿಮಾನಿಗಳು ನೀರಾಳರಾಗುವಂತೆ ಮಾಡಿದ್ದ ಆರ್​ಸಿಬಿ ಇದೀಗ 2026 ರ ಐಪಿಎಲ್‌ನಲ್ಲೂ (IPL 2026) ಟ್ರೋಫಿ ಎತ್ತಿಹಿಡಿಯುವ ಮೂಲಕ ತನ್ನ ಅಭಿಮಾನಿ ಬಳಗಕ್ಕೆ ಡಬಲ್ ಸಂತೋಷ ನೀಡಿದೆ.

ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್​ಸಿಬಿ ತನ್ನ ಹಾಲಿ ಚಾಂಪಿಯನ್‌ ಪಟ್ಟವನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ.

Leave a Reply

Your email address will not be published. Required fields are marked *

Join WhatsApp