ದುಬಾರೆ ದುರಂತ ನಂತರ ಎಚ್ಚೆತ್ತ ಅರಣ್ಯ ಇಲಾಖೆ ವನ್ಯಜೀವಿ ಸಫಾರಿಗಳಿಗೆ ತಾತ್ಕಾಲಿಕ ನಿರ್ಬಂಧ

ಬೆಂಗಳೂರು: ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಘಟನೆ ಬಳಿಕ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತೆರೆದ ವಾಹನಗಳಲ್ಲಿ ನಡೆಸುತ್ತಿದ್ದ ವನ್ಯಜೀವಿ ಸಫಾರಿಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು ಸೇರಿದಂತೆ ಹಲವು ಅರಣ್ಯ ಪ್ರದೇಶಗಳಲ್ಲಿ ಇನ್ನುಮುಂದೆ ತೆರೆದ ಜೀಪ್‌ಗಳನ್ನು ಸಫಾರಿಗೆ ಬಳಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಈ ಕುರಿತು ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವ‌ರ್ ಖಂಡ್ರೆ ತಿಳಿಸಿದ್ದಾರೆ.ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟು ಉಕ್ಕಿನ ಕಂಬಿಗಳಿಂದ ಬಲಪಡಿಸಿದ ಟಫ್ರೆಂಡ್ ಗ್ಲಾಸ್ ಹೊಂದಿರುವ ಮುಚ್ಚಿದ ವಾಹನಗಳನ್ನು ಸಫಾರಿಗೆ ಬಳಸಲು ಇಲಾಖೆ ತೀರ್ಮಾನಿಸಿದೆ. ಜೊತೆಗೆ ಎಲ್ಲ ಸಫಾರಿ ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ತುರ್ತು ಪರಿಸ್ಥಿತಿಗೆ ಆಂಬುಲೆನ್ಸ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.

ಇತ್ತೀಚೆಗೆ ದುಬಾರೆ ಶಿಬಿರದಲ್ಲಿ ಕಂಜನ್ ಮತ್ತು ಮಾರ್ತಾಂಡ ಆನೆಗಳನ್ನು ಕಾವೇರಿ ನದಿಗೆ ಸ್ನಾನಕ್ಕೆ ಕರೆತಂದ ವೇಳೆ ಅವು ಪರಸ್ಪರ ಕಾದಾಡಿಕೊಂಡಿದ್ದವು. ಈ ಸಂದರ್ಭ ಆನೆಗಳ ನಡುವೆ ಸಿಲುಕಿದ ಚೆನ್ನೈ ಮೂಲದ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಬಳಿಕ ಗಾಯಗೊಂಡಿದ್ದ ಮಾರ್ತಾಂಡ ಆನೆಯೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿತ್ತು.

Leave a Reply

Your email address will not be published. Required fields are marked *

Join WhatsApp