ಕಾರ್ಕಳ,:ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಶ್ರೀ ವಿ ಸುನಿಲ್ ಕುಮಾರ್ ನೇತೃತ್ವದ ವಿಕಾಸ ಸೇವಾ ಸಂಸ್ಥೆ, ಕಾರ್ಕಳ ವತಿಯಿಂದ ‘ವಿಕಾಸ ಉದ್ಯೋಗ ಸೇತು’ಉದ್ಯೋಗ ಮೇಳವನ್ನು ಜುಲೈ 9, 2026 (ಗುರುವಾರ)ರಂದು ಆಯೋಜಿಸಲಾಗಿದೆ.
ಕಾರ್ಕಳದಲ್ಲೇ ಬಹು ರಾಷ್ಟ್ರೀಯ (MNC) ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶವನ್ನು ಈ ಉದ್ಯೋಗ ಮೇಳದ ಮೂಲಕ ಕಲ್ಪಿಸಲಾಗಿದೆ. ಮಂಗಳೂರು, ಉಡುಪಿ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಕಂಪನಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿವೆ.10ನೇ ತರಗತಿ, ಪಿಯುಸಿ, ಯಾವುದೇ ಪದವಿ, ಐಟಿಐ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.ಉದ್ಯೋಗ ಮೇಳವು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ವಿಕಾಸ ಶಾಸಕ ಜನಸೇವಾ ಕಚೇರಿ ಕಟ್ಟಡ, ಕಾರ್ಕಳ ಇಲ್ಲಿ ನಡೆಯಲಿದೆ.

ಆಸಕ್ತ ಅಭ್ಯರ್ಥಿಗಳು ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಾಯಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ 7795547123 / 9741494589 ಸಂಖ್ಯೆಯನ್ನು ಸಂಪರ್ಕಿಸಲು ಸಂಘಟಕರು ತಿಳಿಸಿದ್ದಾರೆ.
