
ಹಾರ್ದಿಕ್ ಪಾಂಡ್ಯ ಐಪಿಎಲ್ ವೈಫಲ್ಯಗಳ ನಡುವೆ, ವೈಯಕ್ತಿಕ ಜೀವನದಲ್ಲಿ ಹೊಸ ಸುದ್ದಿಯೊಂದು ವೈರಲ್ ಆಗಿದೆ. ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದ ನಂತರ, ಪಾಂಡ್ಯ ಮಹಿಕಾ ಶರ್ಮಾ ಅವರನ್ನು ಡೇಟಿಂಗ್ ಮಾಡುತ್ತಿದ್ದರು. ಮೇ 22 ರಂದು ಮಹಿಕಾ ಜೊತೆ ಹಾರ್ದಿಕ್ ಎರಡನೇ ಬಾರಿಗೆ ವಿವಾಹವಾಗಲಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಈ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.
