ಮೋಹನ್​​ಲಾಲ್ ಅಭಿನಯದ ‘ದೃಶ್ಯಂ 3’ ಚಿತ್ರ ಎರಡೇ ದಿನದ ದಾಖಲೆಯ ಕಲೆಕ್ಷನ್ 100 ಕೋಟಿ

ಮೋಹನ್‌ಲಾಲ್ ಮತ್ತು ಜೀತು ಜೋಸೆಫ್ ಅವರ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಎರಡೇ ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿ ಕ್ಲಬ್‌ಗೆ ಹತ್ತಿರವಾಗಿದೆ.

ಮೋಹನ್‌ಲಾಲ್ ಅವರ ಅದ್ಭುತ ನಟನೆ ಮತ್ತು ಜೀತು ಜೋಸೆಫ್ ಅವರ ನಿರ್ದೇಶನ ಈ ಸಿನಿಮಾದ ಯಶಸ್ಸಿಗೆ ಕಾರಣವಾಗಿದೆ.ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಈ ಚಿತ್ರಮಲಯಾಳಂ ಚಿತ್ರರಂಗದ ಇತಿಹಾಸದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದ ‘ದೃಶ್ಯಂ’. ಈಗ ಈ ಸರಣಿಯಲ್ಲಿ ಮೂರನೇ ಭಾಗ ರಿಲೀಸ್ ಆಗಿ,ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆದಿದೆ ‘ದೃಶ್ಯಂ 3’ ಸಿನಿಮಾ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ ಬ್ಲಾಕ್‌ಬಸ್ಟರ್ ಕಲೆಕ್ಷನ್ ಮಾಡಿಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಭಾರತದಲ್ಲಿ ಈ ಸಿನಿಮಾ ಎರಡನೇ ದಿನ 11.05 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತದ ಗ್ರಾಸ್ ಕಲೆಕ್ಷನ್ 31.18 ಕೋಟಿ ರೂಪಾಯಿ ಆಗಿದೆ.ವಿಶೇಷ ಎಂದರೆ ವಿದೇಶದಲ್ಲಿ ಈ ಸಿನಿಮಾ ಎರಡನೇ ದಿನ 20 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಎರಡೇ ದಿನಕ್ಕೆ ‘ದೃಶ್ಯಂ 3’ ವಿಶ್ವಾದ್ಯಂತ ಬರೋಬ್ಬರಿ 76.18 ಕೋಟಿ ಗ್ರೋಸ್ ಕಲೆಕ್ಷನ್ ಮಾಡುವ ಮೂಲಕ 100 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ.

Leave a Reply

Your email address will not be published. Required fields are marked *

Join WhatsApp