ಮೋಹನ್ಲಾಲ್ ಮತ್ತು ಜೀತು ಜೋಸೆಫ್ ಅವರ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಎರಡೇ ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿ ಕ್ಲಬ್ಗೆ ಹತ್ತಿರವಾಗಿದೆ.
ಮೋಹನ್ಲಾಲ್ ಅವರ ಅದ್ಭುತ ನಟನೆ ಮತ್ತು ಜೀತು ಜೋಸೆಫ್ ಅವರ ನಿರ್ದೇಶನ ಈ ಸಿನಿಮಾದ ಯಶಸ್ಸಿಗೆ ಕಾರಣವಾಗಿದೆ.ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಈ ಚಿತ್ರಮಲಯಾಳಂ ಚಿತ್ರರಂಗದ ಇತಿಹಾಸದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದ ‘ದೃಶ್ಯಂ’. ಈಗ ಈ ಸರಣಿಯಲ್ಲಿ ಮೂರನೇ ಭಾಗ ರಿಲೀಸ್ ಆಗಿ,ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ ‘ದೃಶ್ಯಂ 3’ ಸಿನಿಮಾ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ ಬ್ಲಾಕ್ಬಸ್ಟರ್ ಕಲೆಕ್ಷನ್ ಮಾಡಿಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಭಾರತದಲ್ಲಿ ಈ ಸಿನಿಮಾ ಎರಡನೇ ದಿನ 11.05 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತದ ಗ್ರಾಸ್ ಕಲೆಕ್ಷನ್ 31.18 ಕೋಟಿ ರೂಪಾಯಿ ಆಗಿದೆ.ವಿಶೇಷ ಎಂದರೆ ವಿದೇಶದಲ್ಲಿ ಈ ಸಿನಿಮಾ ಎರಡನೇ ದಿನ 20 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಎರಡೇ ದಿನಕ್ಕೆ ‘ದೃಶ್ಯಂ 3’ ವಿಶ್ವಾದ್ಯಂತ ಬರೋಬ್ಬರಿ 76.18 ಕೋಟಿ ಗ್ರೋಸ್ ಕಲೆಕ್ಷನ್ ಮಾಡುವ ಮೂಲಕ 100 ಕೋಟಿ ಕ್ಲಬ್ನತ್ತ ಮುನ್ನುಗ್ಗುತ್ತಿದೆ.
